ಭದ್ರಾವತಿ, ಏ. ೨೭: ಈ ಬಾರಿ ನಗರಸಭೆ ಚುನಾವಣೆಯಲ್ಲಿ ೧,೨೨,೯೭೪ ಮಂದಿ ಮತದಾನದ ಹಕ್ಕು ಹೊಂದಿದ್ದು, ಪೈಕಿ ೭೬,೮೬೪ ಮತದಾರರು ಹಕ್ಕು ಚಲಾಯಿಸಿದ್ದಾರೆ.
೩೮,೧೨೮ ಪುರುಷ, ೩೮,೭೩೬ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದು, ಶೇ.೬೨.೫ರಷ್ಟು ಮತದಾನ ನಡೆದಿದೆ. ಮತದಾನದಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಹೊಸ ಸಿದ್ದಾಪುರ ವಾರ್ಡ್ ನಂ.೩೦ರ ಮತಗಟ್ಟೆ ೧೧೭ರಲ್ಲಿ ಒಟ್ಟು ೧೨೪೧ ಮತದಾರರಿದ್ದು, ಈ ಪೈಕಿ ೧೦೯೫ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಹೆಚ್ಚು ಮತದಾನವಾದ ಮತಗಟ್ಟೆಯಾಗಿದೆ. ಎಂಪಿಎಂ ಆಸ್ಪತ್ರೆ ವ್ಯಾಪ್ತಿಯ ವಾರ್ಡ್ ನಂ.೧೯ರ ಮತಗಟ್ಟೆ ೭೪ರಲ್ಲಿ ಒಟ್ಟು ೬೮೮ ಮತದಾರರಿದ್ದು, ಈ ಪೈಕಿ ೧೬೭ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಕಡಿಮೆ ಮತದಾನವಾದ ಮತಗಟ್ಟೆಯಾಗಿದೆ.
No comments:
Post a Comment