ಎಂ. ಸುನಿತಾಕುಮಾರಿ
ಭದ್ರಾವತಿ : ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಎಂ. ಚನ್ನಪ್ಪನವರ್ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದು, ವ್ಯವಸ್ಥಾಪಕಿ ಎಂ. ಸುನಿತಾಕುಮಾರಿಯವರು ಶುಕ್ರವಾರ ಪ್ರಭಾರ ಅಧಿಕಾರ ವಹಿಸಿಕೊಂಡರು.
ಸುಮಾರು ೧೮ ತಿಂಗಳು ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವ ಪ್ರಕಾಶ್ ಎಂ. ಚನ್ನಪ್ಪನವರ್ ಮುಂಬಡ್ತಿ ಪಡೆದು ಬೇರೆಡೆಗೆ ವರ್ಗಾವಣೆಗೊಳ್ಳಲಿದ್ದಾರೆಂಬ ಎಂಬ ಮಾಹಿತಿ ಒಂದೆಡೆ ಹರಿದಾಡುತ್ತಿದ್ದು, ಮತ್ತೊಂದೆಡೆ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ.
ಈ ನಡುವೆ ನಗರಸಭೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಪುರಸಭೆ ಮುಖ್ಯಾಧಿಕಾರಿ ಗ್ರೇಡ್ ಹುದ್ದೆಯಲ್ಲಿಯೇ ಮೂಲ ವೇತನದೊಂದಿಗೆ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿತಾಕುಮಾರಿಯವರು ಪ್ರಭಾರ ಅಧಿಕಾರವಹಿಸಿಕೊಂಡಿದ್ದಾರೆ.
ಸುನಿತಾಕುಮಾರಿಯವರು ಮೂಲತಃ ಕೆಎಂಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಈ ಹಿಂದೆ ೨ ವರ್ಷ ಕಂದಾಯಾಧಿಕಾರಿ, ೬ ವರ್ಷ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸಿ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದರು. ಆದರೆ ಬೇರೆಡೆ ವರ್ಗಾವಣೆ ಬಯಸದೆ ವ್ಯವಸ್ಥಾಪಕಿ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸುನಿತಾಕುಮಾರಿಯವರಿಗೂ ಸಹ ಪೌರಾಯುಕ್ತ ಗ್ರೇಡ್-೨ ಹುದ್ದೆ ಅಧಿಕಾರಿಯಾಗಿ ಮುಂಬಡ್ತಿ ಲಭಿಸಲಿದೆ ಎನ್ನಲಾಗಿದೆ.
No comments:
Post a Comment